Sunday, September 25, 2016

'ಮೌನವೇಕೆ ಹೃದಯಾ!?'

'ಅಲುಗಾಡಿತು ಮನವೇಕೋ ಇಂದು,
ನಿನ್ನಯ ಮೌನವಾ ಕಂಡು.
ಹೇಳಿಬಿಡು ಕಾರಣವಾ,
ಆಗೋದು ಆಗಿಬಿಡಲಿ ಇಂದೇ.

ಏನೆಂದು ತಿಳಿಯಲಿ ಮೌನದ ಕಾರಣ,
ನೀ ಒಂಟಿಯಲ್ಲ ಬೇಗುದಿಯಲಿ,
ಕಾದಿದೆ ಮನವಿಂದು ನಿನ್ನ ನುಡಿಗಾಗಿ,
ನುಡಿದುಬಿಡು ಏನಾದರೊಂದು ಕೇಳುವೆ‌.

ಏನೇ ಆಗಲಿ, ನುಡಿದುಬಿಡು ನುಡಿಯಾ,
ಪ್ರೀತಿಯದ್ದೋ ಆಕ್ರೋಷದ್ದೋ ಏನೋ ಒಂದು,
ನಿನ್ನೀ ಮೌನವೇ ಸುಡುತಿದೆ ಎನ್ನೆದೆಯಾ!
ಮಾತನಾಡೆಯಾ ನನ್ನ ಹೃದಯಾ!?'

No comments:

Post a Comment